ಸುಂದರ, ಕಾಂತಿಯುತ, ರೇಷ್ಮೆಯಂತೆ ಹೊಳೆಯುವ ಕೂದಲು ಪ್ರತಿಯೊಬ್ಬ ಮಹಿಳೆಯ ಆಶಯವಾಗಿರುವುದು. ತನ್ನ ಕೂದಲನ್ನು ಪ್ರತಿಯೊಬ್ಬರೂ ನೋಡುತ್ತಿರಬೇಕು ಮತ್ತು ಅದರ ಅಂದದ ಬಗ್ಗೆ ಗುಣಗಾನ ಮಾಡುತ್ತಿರಬೇಕೆಂಬ ಆಸೆ ಮಹಿಳೆಯರಲ್ಲಿ ಇರುವುದು. ಆದರೆ ಕೆಲವೊಂದು ಸಲ ಕೂದಲಿಗೆ ಹವಾಮಾನ, ವಾತಾವರಣದಲ್ಲಿನ ಕಲ್ಮಶ ಇತ್ಯಾದಿಗಳಿಂದ ಹಾನಿಯಾಗುವುದು. ಕೂದಲು ನಿಸ್ತೇಜವಾಗಿ ಉದುರುವುದು, ತುಂಡಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು, ಅದರಲ್ಲೂ ಕೆಲವೊಮ್ಮೆ ಕೂದಲು ಜಿಡ್ಡು-ಜಿಡ್ಡಾಗಿ ಹೇರ್‌ಸ್ಟೈಲ್ ಮಾಡಿಕೊಳ್ಳುವುದಕ್ಕೆ ತುಂಬಾನೇ ಪರದಾಟ ಮಾಡಬೇಕಾಗುತ್ತದೆ ಅಲ್ಲವೇ? ಅದರಲ್ಲೂ ತಲೆನೋವಿನ ವಿಷಯವೆಂದರೆ, ಯಾವುದಾದರೂ ಫಂಕ್ಷನ್‌ಗೆ ಹೋಗಬೇಕಾದ್ರೆ ತಲೆಯಲ್ಲಿ ಎಣ್ಣೆ ಅಥವಾ ಜಿಡ್ಡಿನಾಂಶವಿದ್ದರೆ ಹೇರ್‌ಸ್ಟೈಲ್ ಮಾಡ್ಕೊಳ್ಳೊಕ್ಕೇ ಆಗಲ್ಲ. ಹೀಗಿರುವಾಗ ತಲೆಗೆ ಶ್ಯಾಂಪು ಹಾಕಿ ಸ್ನಾನ ಮಾಡುವಷ್ಟು ಸಮಯ ಕೂಡಾ ಇರೋದಿಲ್ಲ. ಅಂತಹ ಸಂದರ್ಭದಲ್ಲಿ ತಲೆಗೂದಲಿನಲ್ಲಿರುವ ಈ ಜಿಡ್ಡಿನಾಂಶವನ್ನು ಯಾವ ರೀತಿ ತೆಗೆಯಬಹುದು ಅನ್ನೋದಕ್ಕೆ ಸುಲಭವಾದ ಟಿಪ್ಸ್‌ನ್ನು ಇಲ್ಲಿ ನೀಡಿದ್ದೇವೆ, ನೀವು ಕೂಡ ಸರಳವಾಗಿ ವಿವರಿಸಲಾದ ವಿಡಿಯೋ ನೋಡಿ, ಸಮಸ್ಯೆಯನ್ನು ಪರಿಹರಿಸಕೊಳ್ಳಿ!
- Catégories
- Hairstyles Tutorials English Tutorials
- Mots-clés
- boldsky-kannada, Hairstyle, Oil Hairstyle, Beauty, Hair Solution, Haircare, Boldsky, Hair treatment
Commentaires